ಪಾರ್ಸೆಕ್ -
ನಕ್ಷತ್ರ ದೂರಗಳನ್ನು ಅಳೆಯಲು ಬಳಸುವ ಏಕಮಾನ. ಇಂಗ್ಲಿಷಿನ ಪ್ಯಾರಲ್ಯಾಕ್ಸ್ (ದಿಗಂತರ) ಮತ್ತು ಆರ್ಕ್ ಸೆಕೆಂಡ್ (1 ಕೋನದ 3600 ನೆಯ ಒಂದು ಅಂಶ) ಪದಗಳ ಸಮುಚ್ಚಯದಿಂದ ಪಾರ್ಸೆಕ್ ಪದವು ವುತ್ಪನ್ನವಾಗಿದೆ. 

ಚಿತ್ರ-1

ನಕ್ಷತ್ರಗಳು ಅಗಾಧ ದೂರಗಳಲ್ಲಿ ಇರುವುದರಿಂದ ಭೂಮಿಯಲ್ಲಿ ಬಳಸುವ ಸಾಂಪ್ರದಾಯಿಕ ಅಳತೆಗೋಲುಗಳಾದ ಮೀಟರ್, ಕಿಲೋಮೀಟರ್‍ಗಳಿಂದ ಆ ಮಹಾದೂರಗಳನ್ನು ಅಳೆದರೆ ಎಣಿಕೆಗೆ ನಿಲುಕದ ಹಿರಿ ಸಂಖ್ಯೆಗಳು ಲಭಿಸುತ್ತದೆ. ಉದಾಹರಣೆಗೆ ನಮ್ಮ ನೆರೆ ನಕ್ಷತ್ರವಾದ ಸೂರ್ಯನ ದೂರ ಸುಮಾರು 149,600,000 ಕಿ.ಮೀ. ಇದರಿಂದ ಮುಂದಿನ ನಕ್ಷತ್ರವಾದ ಪ್ರಾಕ್ಸಿಮಾ ಸೆಂಟಾರಿಯ ದೂರ ಸುಮಾರು 40,439,700,000,000 ಕಿ.ಮೀ. ಇನ್ನೂ ದೂರ ದೂರದ ನಕ್ಷತ್ರಗಳಿಗೆ ತೆರಳಿದಂತೆ ಈ ಸಂಖ್ಯೆಗಳು ಅತಿಯಾಗಿ ಏರಿ ಸಾಮಾನ್ಯ ಜ್ಞಾನದ ಅಳವಿಗೆ ಅತೀತವಾಗುತ್ತವೆ. ಹೀಗಾಗಿ ಬೆಳಕು - ವರ್ಷ (ನೋಡಿ- ಬೆಳಕು-ವರ್ಷ) ಮತ್ತು ಅದಕ್ಕಿಂತ ಶಾಸ್ತ್ರೀಯವಾದ ಪಾರ್ಸೆಕ್ ಚಾಲ್ತಿಗೆ ಬಂದಿವೆ. 

ಚಿತ್ರ-2

ಂಃ ರೇಖೆ ಅ ಬಿಂದುವಿನಲ್ಲಿ ರಚಿಸುವ ಕೋನ ಂಅಃ ಗೆ, ಂಃ ಯನ್ನು ಕುರಿತು ಅ ಯ ದಿಗಂತರವೆಂದು ಹೆಸರು. ಇಲ್ಲಿ ಂಃ  ಆಧಾರ ರೇಖೆ (ಚಿತ್ರ 1). ಭೂಕಕ್ಷೆಯ ಸರಾಸರಿ ತ್ರಿಜ್ಯವನ್ನು [=1 ಖಗೋಳಮಾನ = (1,496 + 0.001) ಘಿ 10 8 ಕಿ. ಮೀ] ಆಧಾರ ರೇಖೆಯಾಗಿ ಇರಿಸಿಕೊಂಡು (ಇದೇ ನಮಗೆ ಅಳತೆ ಮಾಡಲು ನೈಸರ್ಗಿಕವಾಗಿ ಒದಗುವ ಅತಿ ಉದ್ದದ ರೇಖೆ ಎಂಬುದನ್ನು ಗಮನಿಸಬೇಕು) ನಕ್ಷತ್ರಗಳ ದಿಗಂತರಗಳನ್ನು-ಈ ತ್ರಿಜ್ಯ ನಕ್ಷತ್ರಗಳಲ್ಲಿ ರಚಿಸುವ ಕೋನ-ಅಳೆಯಲಾಗಿದೆ. ದಿಗಂತರ 1" ಇರುವ ನಕ್ಷತ್ರ ಭೂಮಿಯಿಂದ 1 ಪಾರ್ಸೆಕ್ ದೂರದಲ್ಲಿದೆ ಎನ್ನುವೆವು. ನಕ್ಷತ್ರದೂರ ಜಾಸ್ತಿ ಆದಂತೆ ದಿಗಂತರ ಕಡಿಮೆ ಆಗುವುದು. ದಿಗಂತರ (1/ಞ)" ಆಗಿದ್ದರೆ ನಕ್ಷತ್ರ ದೂರ ಞ ಪಾರ್ಸೆಕುಗಳು. ಭೂಮಿಯಿಂದ ಪ್ರಾಕ್ಸಿಮಾ ಸೆಂಟಾರಿಯ ದೂರ 1.31 ಪಾರ್ಸೆಕ್‍ಗಳು.
		1 ಪಾರ್ಸೆಕ್ = 206.265 ಖಗೋಳಮಾನಗಳು
			= 3.263 ಬೆಳಕು-ವರ್ಷಗಳು
			= 3.0857 x 10 13 ಕಿ.ಮೀ.				
(ಸಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ